`ಮಹಾವೀರ ಮಾಚಿದೇವ` ಈ ವಾರ ಬಿಡುಗಡೆ
Posted date: 14 Mon, Mar 2016 – 09:32:47 AM

ಶ್ರೀ ಆಂಜನೇಯ ಕ್ರಿಯೇಷನ್ ಅವರ ಶ್ರೀಮತಿ ಅನಿತಾ ಸಿದ್ದೇಶ್ವರ ಅರ್ಪಿಸುವ ಸಿ ಸಿದ್ದೇಶ್ವರ ಅವರ ಐದು ಕೋಟಿ ನಿರ್ಮಾಣದ ೧೨ ಶತಮಾನದ ಕ್ರಾಂತಿ ಕಾರಿ ‘ಮಹಾವೀರ ಮಾಚಿದೇವ’ ಸಿನಿಮಾ ಕನ್ನಡ ಭಾಷೆಯಲ್ಲಿ ಈ ವಾರ ೧೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ೧೫ ದಿವಸಗಳ ನಂತರ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಅಂದುಕೊಂಡಿದ್ದಾರೆ.

ಇಂಜಿನಿಯರಿಂಗ್ ಮುಗಿಸಿ ಧಾರವಾಡದಲ್ಲಿ ಕೆಲವು ವರ್ಷ ಇದ್ದು ಈಗ ಹಿಂದೂಪುರದಲ್ಲಿ ನೆಲೆಸಿರುವ ನಿರ್ಮಾಪಕ ಸಿದ್ದೇಶ್ವರ್ ಅವರ ಕುಲ ದೇವರು ಶ್ರೀ ಮಾಚಿದೇವ. ಈ ಸಿನಿಮಾ ಮಾಡುವುದಕ್ಕೂ ಮುಂಚೆ ಒಂದು ಅಧ್ಯಯನ ಮಾಡಿ ಅನೇಕ ವಿಚಾರಗಳನ್ನು ಒಟ್ಟುಗೂಡಿಸಿ ಶ್ರೀ ಮಾಚಿ ದೇವರ ಮಹಿಮೆಯನ್ನು ಸಾರುವ ಈ ಚಿತ್ರದಲ್ಲಿ ಶ್ರೀ ಬಸವಣ್ಣ, ಮಾಚಿದೇವ, ಅಲ್ಲಮ ಪ್ರಭು ವಿರಚಿತ ೧೨ ವಚನಗಳನ್ನು ಸಿನಿಮಾದಲ್ಲಿ ಉಪಯೋಗಿಸಿಕೊಂಡಿದ್ದಾರೆ. ಒಂದು ಹಾಡನ್ನು ಸಂಗೀತ ಸಂಯೋಜನೆ ಮಾಡಿರುವ ನಾದ ಬ್ರಹ್ಮ್ಬ ಹಂಸಲೇಖ ಅವರು ರಚಿಸಿದ್ದಾರೆ.

೧೨ ನೇ ಶತಮಾನದ ಶ್ರೀ ಬಸವಣ್ಣ ಅವರ ಕಾಲದಲ್ಲಿ ವಚನ ಸಾಹಿತ್ಯದಲ್ಲಿ ಪ್ರಕಾಶಮಾನಕ್ಕೆ ಬಂದ ಮಾಚಿದೇವ ಚಿತ್ರದಲ್ಲಿ ದಕ್ಷ ಬ್ರಹ್ಮ ಪ್ರಸ್ತಾಪ ಇದೆ. ಅದೇ ವೀರ ಭದ್ರನ ವಿಚಾರ. ಕಲಿಯುಗದಲ್ಲಿ ವೀರಭದ್ರನಿಗೆ ಶರಣರ ಸಾಂಗತ್ಯ ದೊರಕಿ ಮುಕ್ತಿ ಸಿಕ್ಕುವ ವಿಚಾರ ಸಹ ಸಿದ್ದೇಶ್ವರ್ ಅವರ ಈ ಸಿನಿಮಾ ಪ್ರಸ್ತಾಪ ಮಾಡಿದೆ. ನನ್ನ ಪುರ್ವ ಜನ್ಮದ ಸುಕೃತ ಈ ‘ಮಹಾ ವೀರ ಮಾಚಿದೇವ’ ಸಿನಿಮಾ ಮಾಡಲು ನನಗೆ ಅವಕಾಶ ಸಿಕ್ಕಿರುವುದು ಎಂದು ನಿರ್ಮಾಪಕರು ನಂಬಿದ್ದಾರೆ.

೧೨ನೇ ಶತಮಾನದಲ್ಲಿ  ಕ್ರಾಂತಿಯೋಗಿ ಬಸವಣ್ಣನವರ ಮಹಾಭಕ್ತ ಮಡಿವಾಳ ಮಾಚಿದೇವ ಜೀವನ ಚರಿತ್ರೆಯಲ್ಲಿ ಮುಖ್ಯ ಪಾತ್ರದಾರಿ ಸಾಯಿಕುಮಾರ್ ಅವರು ಅಭಿನಯಿಸಿದ್ದಾರೆ.

ಈ ಚಿತ್ರವನ್ನು ನಂದಿಕಾಮೇಶ್ವರ ರೆಡ್ಡಿ ನಿರ್ದೇಶನ ಮಾಡಿದ್ದಾರೆ .  ತೆಲುಗಿನ ಹಲವಾರು ನಿರ್ದೇಶಕರ ಬಳಿ ಕೆಲಸಮಾಡಿರುವ ಇವರ ನಿರ್ದೇಶನದ ಮೊದಲ ಕನ್ನಡ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ಗಜೇಂದ್ರ ಅವರು ಕಥೆ, ಚಿತ್ರಕಥೆ,ಸಾಹಿತ್ಯ ಬರೆದಿದಾರೆ.

ಪ್ರಭು ದಾಸ್ ಅವರ ಕಲಾ ನಿರ್ದೇಶನ ಪ್ರಮುಖವಾದ ಅಂಶಗಳಲ್ಲಿ ಒಂದು. ಸಾಯಿಕುಮಾರ್ ಜೊತೆಗೆ ಬಿ ಸಿ ಪಾಟೀಲ್, ಚಾರುಲತಾ, ವಿಜಯಕಾಶಿ, ಶ್ರೀ ನಿವಾಸಪ್ರಭು, ಥ್ರಿಲ್ಲರ್ ಮಂಜು, ಸತ್ಯಜಿತ್, ರಮೇಶ್ ಭಟ್, ಸುಚಿತ್ರಾ, ಉಮೇಶ್ ಹಾಗು ಇನ್ನಿತರರು ತಾರಾಗಣದಲ್ಲಿ ಇದ್ದಾರೆ. 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed